ಫರಾನ್ ಅಖ್ತರ್ (ಹಿಂದಿ:फ़रहान अख़्तर; 1974 ರ ಜನವರಿ 9 ರಂದು ಜನನ), ಭಾರತೀಯ ಚಲನಚಿತ್ರ ತಯಾರಕರು , ಚಿತ್ರಕತೆಗಾರ, ನಟ, ಹಿನ್ನೆಲೆ ಗಾಯಕ, ಗೀತಕಾರ, ಚಲನಚಿತ್ರ ನಿರ್ಮಾಪಕ, ಮತ್ತು ದೂರದರ್ಶನದ ಆತಿಥೇಯ ನಿರೂಪಕರಾಗಿದ್ದಾರೆ. ಇವರು ಪ್ರಧಾನವಾಗಿ ಹಿಂದಿ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಇವರು ನಿರ್ದೇಶಿಸಿದ ಮೊದಲ ಚಿತ್ರ ದಿಲ್ ಚಾಹತಾ ಹೈ ಯನ್ನು ಎಲ್ಲೆಡೆ ಪ್ರಶಂಸಿಸಲಾಯಿತು. ಮೊದಲ ಬಾರಿಗೆ ರಾಕ್ ಆನ್!! ನಲ್ಲಿ ಅಭಿನಯಿಸುವ ಮೂಲಕ ನಟರಾದರು. == ವೈಯಕ್ತಿಕ ಜೀವನ ಮತ್ತು ಹಿನ್ನೆಲೆ == ಫರಾನ್ ಅಖ್ತರ್, ಚಿತ್ರಕತೆಗಾರ ಜಾವೆದ್ ಅಖ್ತರ್ ಮತ್ತು ಹನಿ ಇರಾನಿಯವರ ಪುತ್ರನಾಗಿ ಮುಂಬೈನಲ್ಲಿ ಜನಿಸಿದರು. ಇವರನ್ನು ಒಬ್ಬ ನಾಸ್ತಿಕನಂತೆ ಬೆಳೆಸಲಾಯಿತು. ಬಾಲ್ಯದ ವಿದ್ಯಾಭ್ಯಾಸವನ್ನು ಜುಹುನಲ್ಲಿರುವ ಮಾನೆಕ್ ಜಿ ಕೂಪರ್ ಶಾಲೆಯಲ್ಲಿ ಮುಗಿಸಿದರು. ಅನಂತರ ವಾಣಿಜ್ಯದಲ್ಲಿ ಪದವಿಯನ್ನು ಪಡೆಯಲು .. ಕಾಲೇಜಿಗೆ ಸೇರಿಕೊಂಡರು. ಆದರೆ ಎರಡನೆಯ ವರ್ಷದಲ್ಲೇ ವಿದ್ಯಾಭ್ಯಾಸವನ್ನು ಕೈಬಿಟ್ಟರು. ನಟಿ ಶಬಾನ ಆಜ್ಮಿ ಇವರ ಮಲತಾಯಿಯಾಗಿದ್ದಾರೆ. ಇವರು ಉರ್ದು ಕವಿ ಜಾನ್ ನಿಸಾರ್ ಅಖ್ತರ್ ರ ಮೊಮ್ಮಗನಾಗಿದ್ದು, ಬಾಲಿವುಡ್ ಚಲನಚಿತ್ರಗಳ ನಿರ್ದೇಶಕಿ/ನೃತ್ಯ ಸಂಯೋಜಕಿ ಫರಾ ಖಾನ್ ರ ಸೋದರ ಸಂಬಂಧಿಯಾಗಿದ್ದಾರೆ. ಅವರ ಸಹೋದರಿ ಜೋಯಾ ಅಖ್ತರ್,(: ://../?=&=1&= ) ಇತ್ತೀಚೆಗಷ್ಟೆ ಲಕ್ ಬೈ ಚಾನ್ಸ್ ಎಂಬ ಅವರ ಮೊದಲ ಚಿತ್ರವನ್ನು ನಿರ್ದೇಶಿಸಿದರು. ಇದರಲ್ಲಿ ಫರಾನ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫರಾನ್, ಅಧುನ್ ಭಾಬನಿ ಅಖ್ತರ್ ರನ್ನು ಮದುವೆಯಾದರು. ಇವರು ಕೇಶವಿನ್ಯಾಸಕಿಯಾಗಿದ್ದು, ತಮ್ಮ ಸಹೋದರನೊಡನೆ ಬಿಬ್ಲಂಟ್ ಸೆಲೂನ್ (ಕೇಶ ಶೃಂಗಾರ ವೃತ್ತಿ)ನಡೆಸುತ್ತಿದ್ದಾರೆ. ಅವರು ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ: ಷಕ್ಯಾ ಮತ್ತು ಅಕಿರಾ. == ವೃತ್ತಿಜೀವನ == ಫರಾನ್ ಅಖ್ತರ್, ಅವರ ವೃತ್ತಿಜೀವನವನ್ನು ತಮ್ಮ 17 ನೇ ವಯಸ್ಸಿನಲ್ಲಿ, ಚಲನಚಿತ್ರ ಛಾಯಾಗ್ರಾಹಕ-ನಿರ್ದೇಶಕ ಮನ್ಮೋಹನ್ ಸಿಂಗ್ ರವರೊಂದಿಗೆ ಲಮ್ಹೇ (1991) ಯಂತಹ ಚಿತ್ರಗಳಲ್ಲಿ ತರಬೇತಿ-ಅಭ್ಯಾಸಿಯಾಗಿ ಕಾರ್ಯನಿರ್ವಹಿಸುವ ಮೂಲಕ ಆರಂಭಿಸಿದರು;ಹಿಮಾಲಯ್ ಪುತ್ರ (1997) ಚಲನಚಿತ್ರದಲ್ಲಿ ನಿರ್ದೇಶಕ ಪಂಕಜ್ ಪರ್ಷರ್ ರ ಸಹಾಯಕ ನಿರ್ದೇಶಕರಾಗುವ ಮೊದಲು ಮೂರು ವರ್ಷಗಳ ಕಾಲ ಅನೇಕ ಚಿತ್ರ ಸಂಭಂಧಿ ಚಟುವಟಿಕೆ, ದೂರದರ್ಶನ ಚಿತ್ರನಿರ್ಮಾಣ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದರು. 2001 ರ ಯಶಸ್ವಿ ಹಿಂದಿ ಚಲನಚಿತ್ರ ದಿಲ್ ಚಾಹತಾ ಹೈ ಗೆ ಚಿತ್ರಕಥೆ ಬರೆದು ನಿರ್ದೇಶಿಸುವ ಮೂಲಕ ಚಿತ್ರಕಥೆಗಾರ ಮತ್ತು ನಿರ್ದೇಶಕರಾದರು. ಈ ಚಲನಚಿತ್ರವನ್ನು ಎಕ್ಸೆಲ್ ಎಂಟರ್ ಟೈನ್ಮೆಂಟ್ ಪ್ರೈವೇಟ್. ಲಿಮಿಟೆಡ್ ನಿರ್ಮಿಸಿತು. ಇದು 1999 ರಲ್ಲಿ ರಿತೇಶ್ ಸಿದ್ವಾನಿ ಯೊಂದಿಗೆ ಒಡಗೂಡಿ ಅವರು ಸಹ ಭಾಗಿತ್ವದಲ್ಲಿ ಸ್ಥಾಪಿಸಿದ ಸಂಸ್ಥೆಯಾಗಿದೆ. ಈ ಚಿತ್ರ (ಇದರಲ್ಲಿ ಅಮೀರ್ ಖಾನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಖನ್ನ ಅಭಿನಯಿಸಿದ್ದಾರೆ), ಅದೇ ತಾನೇ ಕಾಲೇಜಿನಿಂದ ಪದವೀಧರರಾಗಿ ಹೊರಬಂದ ಮೂರು ಜನ ಸ್ನೇಹಿತರ ಕಥೆ ಮತ್ತು ಪ್ರೇಮ ಅಲ್ಲದೇ ಸ್ನೇಹಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅವರು ವ್ಯವಹರಿಸುವ ಬಗೆಯನ್ನು ಒಳಗೊಂಡಿದೆ. ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆ ಇದನ್ನು ಹೆಚ್ಚಾಗಿ ಮೆಚ್ಚಿಕೊಂಡಿತು. ಇದು ಅತ್ಯುತ್ತಮ ಚಿತ್ರಕಥೆ, ನಿರ್ದೇಶನ ಮತ್ತು ಚಲನಚಿತ್ರಗಳನ್ನೊಳಗೊಂಡಂತೆ ಅನೇಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಕೆಲವು ನಾಮನಿರ್ದೇಶನಗಳನ್ನು ಗಳಿಸಿತು. ಇದು ಆ ವರ್ಷದ ಹಿಂದಿಯಲ್ಲಿ ಅತ್ಯುತ್ತಮ, ವೈಶಿಷ್ಟ್ಯಪೂರ್ಣ ಚಿತ್ರಕ್ಕೆ ನೀಡಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ತರುವಾಯ ಅಖ್ತರ್ ಅವರ ಮುಂದಿನ ಯೋಜನೆಯಾದ ಲಕ್ಷ್ಯ (2004) ನ ನಿರ್ದೇಶನದತ್ತ ಗಮನಹರಿಸಿದರು. ಇದು ಜೀವನದಲ್ಲಿ ಗುರಿ ಇಲ್ಲದೇ ಅಲೆದಾಡುತ್ತಿರುವ, ಅನಂತರ ತನಗಾಗಿ ಒಂದು ಗುರಿಯನ್ನು ನಿರ್ಧರಿಸಿಕೊಳ್ಳುವ ಯುವಕನ ಕಥೆಯಾಗಿದ್ದು, ಇದರಲ್ಲಿ ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದರೂ ಕೂಡ, ಅಪಾರ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು. ಈ ಚಿತ್ರದ ಕಥೆಯನ್ನು ಅವರ ತಂದೆ ಜಾವೆದ್ ಅಖ್ತರ್ ಬರೆದಿದ್ದರು. ಈ ನಡುವೆ ಅವರು ಗುರಿಂದರ್ ಚಂದ್ ರ, 2004ರಲ್ಲಿ ತೆರೆಕಂಡ ಹಾಲಿವುಡ್ ಚಲನಚಿತ್ರ ಬ್ರೈಡ್ ಅಂಡ್ ಪ್ರಿಜ್ಯುಡೀಸ್ ಗೆ ಗೀತರಚನೆ ಮಾಡಿದ್ದರು. ಅನಂತರ ಫರಾನ್ 1978ರ ಅಮಿತಾಭ್ ಬಚ್ಚನ್ ಅಭಿನಯದ ಡಾನ್ ಚಿತ್ರದ ರೀಮೇಕ್, ಡಾನ್ - ದಿ ಚೇಸ್ ಬಿಗಿನ್ಸ್ ಅಗ್ಯೇನ್ ಅನ್ನು ನಿರ್ದೇಶಿಸಿದರು. ಶಾರುಖ್ ಖಾನ್ ಈ ಚಲನಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದು 2006 ರ ಅಕ್ಟೋಬರ್ 20 ರಂದು ತೆರೆಕಂಡಿತು. ಈ ಚಲನಚಿತ್ರ ವಿಮರ್ಶಕವಾಗಿ ನಿಂದನೆಗೆ ಗುರಿಯಾದರೂ ಕೂಡ 50 ಕೋಟಿಗೂ ಅಧಿಕ ಗಳಿಕೆ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಜಯ ಸಾಧಿಸಿತು. ಅಲ್ಲದೇ ವರ್ಷದ ಐದನೇ ಯಶಸ್ವಿ ಚಿತ್ರವಾಯಿತು. 2007 ರಲ್ಲಿ ಫರಾನ್ ಹನಿಮೂನ್ ಟ್ರಾವೆಲ್ಸ್ ಪ್ರೈವೆಟ್. ಲಿಮಿಟೆಡ್. ಚಿತ್ರವನ್ನು ನಿರ್ಮಿಸಿದರು, ಇದು ಕೂಡ ಗಲ್ಲಾಪೆಟ್ಟಿಯಲ್ಲಿ ತೃಪ್ತಿಕರ ಮಟ್ಟದ ಸಾಧನೆ ಕಂಡಿತು. 2007 ರಲ್ಲಿ, ರೋಗಲಕ್ಷಣ ಮತ್ತು ರೋಗಿಗೆ ಕೌಟುಂಬಿಕ ಬೆಂಬಲದ ಅಗತ್ಯವಿರುವ ಕಥೆಯುಳ್ಳ, 12 ನಿಮಿಷದ ಕಿರುಚಿತ್ರ ಪಾಸಿಟಿವ್ ಅನ್ನು ನಿರ್ದೇಶಿದರು. ಇದನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದ್ದು, ಇದು 'ಏಡ್ಸ್ ಜಾಗೋ' (ಏಡ್ಸ್ ಜಾಗೃತಿ )ಯ ಭಾಗವಾಗಿದೆ. ನಾಲ್ಕು ಕಿರು ಚಿತ್ರಗಳ ಸರಣಿಗಳನ್ನು ಮೀರಾ ನಾಯರ್, ಸಂತೋಷ್ ಸಿವನ್ , ವಿಶಾಲ್ ಭಾರಧ್ವಜ್ ಮತ್ತು ಫರಾನ್ ಅಖ್ತರ್ ನಿರ್ದೇಶಿಸಿದ್ದಾರೆ. ಇವುಗಳನ್ನು ಮೀರಾ ನಾಯರ್ ರ ಮೀರಾ ಬಾಯಿ ಫಿಲ್ಮ್ಸ್ ಕಂಪನಿಯೊಂದಿಗೆ ಮತ್ತು ಆವಾಹನ್ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಅಲ್ಲದೇ ಬಿಲ್ ಅಂಡ್ ಮಿಲಿಂಡ್ ಗೇಟ್ಸ್ ಫೌಂಡೇಷನ್ನ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಇದರಲ್ಲಿ, ಬೊಮನ್ ಇರಾನಿ, ಶಬಾನಾ ಆಜ್ಮಿ ಮತ್ತು ಆರಂಭಿಕ ನಟ ಅರ್ಜುನ್ ಮಾಥೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. 2008 ರಲ್ಲಿ, ರಾಕ್ ಆನ್!! ಚಿತ್ರದಲ್ಲಿ ಅಭಿನಯಿಸುವ ಮೂಲಕ ಅಖ್ತರ್ ತಮ್ಮ ಆರಂಭಿಕ ವೃತ್ತಿಪರತೆಯ ನಟರಾದರು. ಇದು ವಿಮರ್ಶಾತ್ಮಕವಾಗಿ ಭಾರಿ ಮೆಚ್ಚುಗೆಯನ್ನು ಗಳಿಸಿತಲ್ಲದೇ ಗಲ್ಲಾ ಪೆಟ್ಟಿಗೆಯಲ್ಲಿಯೂ ಸಾಧನೆ ಕಂಡಿತು. ಅದರಲ್ಲೂ ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಅತ್ಯಂತ ಯಶಸ್ವಿಯಾಯಿತು. ಫರಾನ್, ಅವರ ಸಹೋದರಿ ಜೋಯಾ ನಿರ್ದೇಶನದ ಮೊದಲ ಚಿತ್ರ ಲಕ್ ಬೈ ಚಾನ್ಸ್ ನಲ್ಲಿಯೂ ಕೂಡ ನಾಯಕ ನಟನಾಗಿ ಕಾಣಿಸಿಕೊಂಡರು. ಕಾರ್ತಿಕ್ ಕಾಲಿಂಗ್ ಕಾರ್ತಿಕ್ ಇವರ ಇತ್ತೀಚೆಗೆ ತೆರೆಕಂಡ ಚಿತ್ರವಾಗಿದೆ. ಇನ್ನೂ ಎರಡು ಚಲನಚಿತ್ರಗಳನ್ನು 2010 ರಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧರಿಸಲಾಗಿತ್ತು: ಧ್ರುವ್ ಮತ್ತು ಗುಲೇಲ್ (ಇವು ಇವರ ನಿರ್ಮಾಣದ ಚಿತ್ರಗಳಾಗಿರದೇ ಕೇವಲ ನಟನೆಯಲ್ಲಿ ಮಾತ್ರ್ರ ಭಾಗಿಯೆನಿಸಿವೆ). ಅಖ್ತರ್ ಮೊದಲ ಬಾರಿಗೆ ರಾಕ್ ಆನ್!! ನಲ್ಲಿ ಹಾಡುವುದರೊಂದಿಗೆ ಗಾಯಕರಾದರಲ್ಲದೇ, ಈ ಚಿತ್ರದ ಬಹುಪಾಲು ಹಾಡುಗಳನ್ನು ಹಾಡಿದ್ದಾರೆ. ಅವರು . . ರೆಹಮಾನ್ ಸಂಗೀತ ಸಂಯೋಜನೆಯ ಬ್ಲೂ ಚಿತ್ರದ ಒಂದು ಹಾಡನ್ನು ಹಾಡಬೇಕಿತ್ತು. ಆದರೆ ಅಖ್ತರ್, ಕಾರ್ತಿಕ್ ಕಾಲಿಂಗ್ ಕಾರ್ತಿಕ್ ನ ಚಿತ್ರೀಕರಣದಲ್ಲಿ ನಿರತರಾದ ಕಾರಣ ಈ ಹಾಡನ್ನು ಹಾಡಲು ಅವರಿಗೆ ಸಮಯ ದೊರೆಯಲಿಲ್ಲ. ನಾಚ್ ಬಲಿಯೇ (2005) ಎಂಬ ನೃತ್ಯ ರಿಯಾಲಿಟಿ ಪ್ರದರ್ಶನದ ಮೊದಲ ಸರಣಿ ಮತ್ತು ಫೆಮಿನಾ ಮಿಸ್ ಇಂಡಿಯಾ (2002ರಲ್ಲಿ) ಎಂಬ ಸೌಂದರ್ಯ ಸ್ಪರ್ಧೆಯನ್ನು ಒಳಗೊಂಡಂತೆ ದೂರದರ್ಶನದ ಕೆಲವು ಪ್ರದರ್ಶನಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇವರು ಇಮ್ಯಾಜಿನ್ ಚಾನಲ್ ನ ಓಯೇ! ಕಾರ್ಯಕ್ರಮದ ಆತಿಥೇಯರಾಗಿದ್ದಾರೆ.ಇಟ್ಸ್ ಫ್ರೈಡೆ! ಎಂದು ಕರೆಯಲಾಗುವ ಪ್ರದರ್ಶನವನ್ನು ನಡೆಸಿಕೊಡುತ್ತಾರೆ. == ಚಲನಚಿತ್ರಗಳ ಪಟ್ಟಿ == === ನಿರ್ದೇಶಕ/ಚಿತ್ರಕಥೆ ಬರಹಗಾರ === === ನಿರ್ಮಾಪಕ === ಗೇಮ್ === ನಟ === === ಹಿನ್ನೆಲೆ ಗಾಯಕ === ರಾಕ್ ಆನ್!! == ಪ್ರಶಸ್ತಿಗಳು == ರಾಷ್ಟ್ರೀಯ ಪ್ರಶಸ್ತಿಗಳು 2002: ಹಿಂದಿಯ ಅತ್ಯುತ್ತಮ ಚಲನಚಿತ್ರಕ್ಕೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ದಿಲ್ ಚಾಹತಾ ಹೈ 2009: ಹಿಂದಿಯ ಅತ್ಯುತ್ತಮ ಚಲನಚಿತ್ರಕ್ಕೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ರಾಕ್ ಆನ್!! ಫಿಲ್ಮ್‌ಫೇರ್ ಪ್ರಶಸ್ತಿಗಳು 2002: ಅತ್ಯುತ್ತಮ ಚಲನಚಿತ್ರಕ್ಕೆ ನೀಡುವ ಫಿಲ್ಮ್ ಫೇರ್ ವಿಮರ್ಶಕರ ಪ್ರಶಸ್ತಿ: ದಿಲ್ ಚಾಹತಾ ಹೈ 2002: ಅತ್ಯುತ್ತಮ ಚಿತ್ರಕಥೆ : ದಿಲ್ ಚಾಹತಾ ಹೈ 2002: ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ : ದಿಲ್ ಚಾಹತಾ ಹೈ: ನಾಮನಿರ್ದೇಶಿತ 2002: ಫಿಲ್ಮ್ ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ : ದಿಲ್ ಚಾಹತಾ ಹೈ : ನಾಮನಿರ್ದೇಶಿತ 2005: ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ : ಲಕ್ಷ್ಯ: ನಾಮನಿರ್ದೇಶಿತ 2007: ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ: ಡಾನ್ - ದಿ ಚೇಸ್ ಬಿಗಿನ್ಸ್ ಅಗ್ಯೇನ್: ನಾಮನಿರ್ದೇಶಿತ 2007: ಫಿಲ್ಮ್ ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ:ಡಾನ್ - ದಿ ಚೇಸ್ ಬಿಗಿನ್ಸ್ ಅಗ್ಯೇನ್: ನಾಮನಿರ್ದೇಶಿತ 2009: ಅತ್ಯುತ್ತಮ ಆರಂಭಿಕ ನಟನಿಗೆ ನೀಡುವ ಫಿಲ್ಮ್ ಫೇರ್ ಪ್ರಶಸ್ತಿ: ರಾಕ್ ಆನ್!! 2009: ಫಿಲ್ಮ್ ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ : ರಾಕ್ ಆನ್!!: ನಾಮನಿರ್ದೇಶಿತ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಫರಾನ್ ಅಖ್ತರ್ ಬಹು ಆಯಾಮದ ವ್ಯಕ್ತಿತ್ವ ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಯಲ್ಲಿ ಫರಾನ್ ಅಖ್ತರ್